ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಮುಖ್ಯರಸ್ತೆಯಲ್ಲಿ ಕಬ್ಬು ತುಂಬಿದ ಲಾರಿಯೊಂದು ಕೆಟ್ಟು ರಸ್ತೆ ಮಧ್ಯೆ ನಿಂತಿರುವ ಘಟನೆ ಇಂದು ನಡೆದಿದೆ. ಇನ್ನೂ ಲಾರಿ ಕೆಟ್ಟು ನಿಂತ ಪರಿಣಾಮ ಲಾರಿಯ ಚಾಲಕ ರಸ್ತೆ ಮಧ್ಯೆಯಲ್ಲೇ ಲಾರಿಯನ್ನು ಬಿಟ್ಟು ಹೋಗಿದ್ದಾನೆ. ಇನ್ನು ರಸ್ತೆ ಮಧ್ಯೆ ಲೋಡ್ ತುಂಬಿದ ಲಾರಿ ನಿಂತಿದ್ದರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ಕೊನೆಗೂ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿದ್ದ ಪ್ರಯಾಣಿಕರ ಸಹಾಯದಿಂದ ದಾರಿ ಮಾಡಿ ಕಳುಹಿಸಿಕೊಟ್ಟರು. ಇನ್ನೂ ಲಾರಿಯ ಚಾಲಕನ್ನು ಸ್ಥಳೀಯರು ಹುಡುಕುತ್ತಿದ್ದಾರೆ.