ನಗರದಲ್ಲಿ ನಿವೃತ್ತ ಶಿಕ್ಷಕರಿಗೆ ಮತ್ತು ಸಾಧಕ ಶಿಕ್ಷಕರಿಗೆ ಹಾಗೂ ಸಾಧಕ ರೈತರಿಗಾಗಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ. ಹನುಮಾನ್ ನಗರದ ತಮ್ಮ ಗೃಹ ಕಚೇರಿಯಲ್ಲಿ ವಿಶ್ವ ಭಾರತ ಸೇವಾ ಸಮಿತಿ ವತಿಯಿಂದ ನಿವೃತ್ತ ಶಿಕ್ಷಕರಿಗೆ, ಸಾಧಕ ಶಿಕ್ಷಕರಿಗೆ ಹಾಗೂ ಸಾಧಕ ರೈತರಿಗಾಗಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮಕ್ಕೆ ಭಾನುವಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿ, ಶಿಕ್ಷಕರು ಹಾಗೂ ರೈತರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು. ಶಿಕ್ಷಕರು, ರೈತರು ಮತ್ತು ಸೈನಿಕರು ನಿಜವಾದ ಅರ್ಥದಲ್ಲಿ ತ್ಯಾಗದ ಮೂಲಕ ರಾಷ್ಟ್ರ ಕಟ್ಟುವವರು, ರಕ್ಷಿಸುವವರು. ಎಂದರು