ಬೆಟಗೇರಿ ನರಸಾಪೂರ ಇಂಡಸ್ಟ್ರೀಯಲ್ ಏರಿಯಾದಲ್ಲಿನ ರಸ್ತೆಯ ಮೇಲೆ ನಿಂಗರಾಜ ಮಾದರ ಸಾ: ನಾಗರಾಳ, ವೆಂಕಟೇಶ ಪವಾರ ಸಾ: ಬೆಟಗೇರಿ, ಪ್ರವೀಣ ಅರಶಿದ್ದಿ ಸಾ: ಬೆಟಗೇರಿ, ಮಹಮ್ಮದಗೌಸ್ ಹಣಗಿ ಸಾ: ಬೆಟಗೇರಿ ಮತ್ತು ಯಲ್ಲಪ್ಪ ಗುಂಜಳ ಸಾ: ನಾಗಸಮುದ್ರ ಎನ್ನುವ ಆರೋಪಿಗಳನ್ನು ಬಂಧಿಸಲಾಗಿದೆ. ಈ ಎಲ್ಲರೂ ಸೇರಿ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಬೆಟಗೇರಿ ಸಿ.ಪಿ.ಐ ಧೀರಜ್ ಬಿ ಶಿಂದೆ ದಾಳಿ ಮಾಡಿ 52 ಇಸ್ಪಿಟ್ ಎಲೆಗಳು, ಒಂದು ಚಾಕಳಿ ಬಾವೇಲ್ ಮತ್ತು 10 ಸಾವಿರ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.