ಬಾಗೇಪಲ್ಲಿ ತಾಲೂಕಿನ ತಿಮ್ಮಂಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಮ್ಮರವಾರಪಲ್ಲಿ ಗ್ರಾಮದಲ್ಲಿ ವಿದ್ಯುತ್ ಅವಘಡ ಸಂಭವಿಸಿ 45 ಕುರಿಗಳು ಮತ್ತು 3 ಮೇಕೆಗಳು ಸೇರಿ 48 ಸಾವನ್ನಪ್ಪಿದ ಧಾರುಣ ಘಟನೆ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಇಂದು ಘಟನಾ ಸ್ಥಳಕ್ಕೆ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಮತ್ತಿತರರು ಭೇಟಿ ನೀಡಿದ್ದು, ಕೆಲ ಕೆಲಸಗಳ ನಿಮಿತ್ತ ಘಟನೆಯ ದಿನ ಬರಲಾಗಿಲ್ಲ. ಆದರೆ ಅಧಿಕಾರಿಗಳನ್ನು ಕಳುಹಿಸಲಾಗಿತ್ತು. ನಾನು ಸರಕಾರದಿಂದ ತಲಾ ಒಂದು ಕುರಿಗೆ ₹7500 ರಂತೆ ಪರಿಹಾರ, ಹಾಗೂ ಇತರೆ ಸೌಲಭ್ಯಗಳನ್ನು ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.