ಮೊಳಕಾಲ್ಮುರು:-ಬರುವ ಆರು ತಿಂಗಳ ಒಳಗಾಗಿ ಶಾಸಕ ಎನ್ ವೈ ಗೋಪಾಲಕೃಷ್ಣ ಮಂತ್ರಿಯಾಗ್ತಾರೆ ಎಂದು ವಿಶ್ವ ಕಾಲಜ್ಞಾನ ಶಿವಯೋಗಿ ಡಾ. ಶ್ರೀ ಶರಣಬಸವ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ. ಗಜೇಂದ್ರಗಡದ ಕೋಡಿಮಠ ತಳ್ಳಿಯಾಳ ಸಂಸ್ಥಾನದ ವಿಶ್ವಕಾಲಜ್ಞಾನ ಶಿವಯೋಗಿ ಡಾ. ಶ್ರೀ ಶರಣಬಸವ ಮಹಾಸ್ವಾಮಿಗಳು ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ 12ಗಂಟೆಗೆ ಶಾಸಕ ಎನ್ ವೈ ಗೋಪಾಲಕೃಷ್ಣ ಸಚಿವ ಸ್ಥಾನದ ಕುರಿತಾಗಿ ಭವಿಷ್ಯ ನುಡಿದಿದ್ದಾರೆ. ಸೇವಾ ಪ್ರವೃತ್ತಿ ಇರುವಂತ ಮನುಷ್ಯ ಸನ್ಮಾರ್ಗದಿಂದ ಬಂದಿದ್ದಾರೆ,ಮುಂದಿನ ಆರು ತಿಂಗಳ ಒಳಗಾಗಿ ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್ ರಚನೆ ಆಗಲಿದೆ.