ಸಾರ್ವಜನಿಕ ಗಣೇಶೋತ್ಸವ ವಿಸರ್ಜನೆ ವೇಳೆ ಸರ್ಕಾರದ ಡಿಜೆ ಆದೇಶವನ್ನು ಉಲ್ಲಂಘನೆ ಮಾಡಿದ ಆರೋಪದಡಿ ಬ್ಯಾಡಗಿ ಕಾ ರಾಜಾ ಗಣೇಶ ಮಂಡಳಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬ್ಯಾಡಗಿ ಪಟ್ಟಣದಲ್ಲಿ ಡಿಜೆ ಹಚ್ಚಿಕೊಂಡು ಮೆರವಣಿಗೆ ಮಾಡಿದ್ದಾರೆ. ಗಣೇಶ ಮಂಡಳಿಯ ಆರು ಜನರ ವಿರುದ್ಧ ತಹಶೀಲ್ದಾರ್ ದೂರು ದಾಖಲಿಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.