ಪಾಂಡವಪುರ ತಾಲ್ಲೂಕಿನ ಕುರಹಳ್ಳಿ ಗ್ರಾಮದಲ್ಲಿ ಆಲೆಮನೆ ಬಳಿ ಆಟವಾಡುತ್ತಿದ್ದಾಗ ಕಬ್ಬಿನ ಹಾಲಿನ ಕುದಿಯುವ ಕೊಪ್ಪರಿಕೆಗೆ ಬಿದ್ದು 8 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಜರುಗಿದೆ. ಕುರಹಳ್ಳಿ ಗ್ರಾಮದ 8ವರ್ಷದ ಗೌರಿ ಎಂಬುವವರೇ ಸಾವನ್ನಪ್ಪಿರುವ ದುರ್ದೈವಿ ಬಾಲಕಿಯಾಗಿದ್ದಾರೆ. ಕಬ್ಬಿನ ಹಾಲಿನ ಕುದಿಯುವ ಕೊಪ್ಪರಿಕೆಗೆ ಬಿದ್ದ ತಕ್ಷಣ ಬಾಲಕಿಯನ್ನು ಎತ್ತಿಕೊಂಡು ಪಾಂಡವಪುರ ಆಸ್ಪತ್ರೆಗೆ ಕರೆದ್ಯೋಯ್ದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಉತ್ತರ ಪ್ರದೇಶದ ಸರ್ನಾಪ್ಲೆ ಗ್ರಾಮದ ಕೃಷ್ಣಪಾಲ್ ಅವರ ಪುತ್ರಿ ಗೌರಿ, ಕುರಹಟ್ಟಿ ಗ್ರಾಮದ ಮಂಚೇಗೌಡರ ಕಬ್ಬಿನ ಆಲೆಮನೆಯಲ್ಲಿ ಈ ದುರಂತ ಸಂಭವಿಸಿದೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ