ಆಂಡ್ರಸನ್‍ಪೇಟೆ ಶ್ರೀರಾಮ ಮಂದಿರದಿಂದ ಮಾರಿಕುಪ್ಪ ಬಾಣಗೆರೆ ನಿಲಿಗಿರಿಹಳ್ಳಿ ಮಾರ್ಗವಾಗಿ ಆಂದ್ರಪ್ರದೇಶದ ಶಾಂತಿಪುರಂಗೆ ಸಮರ್ಪಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಶಾಸಕಿ ರೂಪಕಲಾಶಶಿಧರ್ ಗುರುವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕಿ ರೂಪಕಲಾಶಶಿಧರ್ ಈ ರಸ್ತೆಯು ನಗರ ಪ್ರದೇಶಕ್ಕೆ ಹಾಗೂ ಆಂದ್ರಪ್ರದೇಶದ ಶಾಂತಿಪುರಂಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಾಗಿದ್ದು ನಗರ ಪ್ರದೇಶದಲ್ಲಿನ ಬಹುತೇಕ ರಸ್ತೆಗಳು ಪೂರ್ಣಗೊಂಡಿದ್ದು ಗ್ರಾಮೀಣಾಭಾಗದಲ್ಲಿನ ರಸ್ತೆಗಳು ಮಾತ್ರ ತೀರ ಹದಗೆಟ್ಟಿರುವುದರಿಂದ ಸಾರ್ವಜನಿಕರ ಒಡಾಟಕ್ಕೆ ತೊಂದರೆಯಾಗಿದೆ ಆದ್ದರಿಂದ ರಸ್ತೆ ಡಾಂಬರಿಕರಣ ಕಾಮಗಾರಿ ಮಾಡುವಂತೆ ಈ ಭಾಗದ ಮುಖಂಡರು ಗ್ರಾಮಸ್ತರು ಭೇಡಿಕೆಯನ್ನು ಮುಂದಿಟ್ಟಿದ್ದರು ಎಂದರು