ಮನೆಯಿಂದಲೇ ಕೆಲಸ ಎಂಬ ಆನ್'ಲೈನ್ ಅಮಿಷಕ್ಕೆ ಮಹಿಳೆಯೊಬ್ಬರು 9 ಲಕ್ಷ ರೂ ಕಳೆದುಕೊಂಡ ಘಟನೆ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಮಹಿಳೆಯಲ್ಲಿ ಜರುಗಿದೆ. ರಮ್ಯಾ ಆರ್ ಕೋಂ ಕೃಷ್ಣ ಹಣ ಕಳೆದುಕೊಂಡವರು. ಈ ಕುರಿತು ನಗರದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಾರ್ಖಾಂಡ್'ನ ಸೈಯದ್ ಮಕ್ಸೂದ್, ಹರಿಯಾಣದ ರೋಹಿತ್ ತಿವಾರಿ ಹಾಗೂ ಆದಿತ್ಯಾ ಸಿಂಗ್ ಚೌಹಾನ್ ಆರೋಪಿಗಳು. ಕಳೆದ ಆ.16ರಿಂದ 22ರ ಸಂಜೆ 4 ಗಂಟೆವರೆಗೆ ಆನ್‌ಲೈನ್ ನಲ್ಲಿ ಟೆಲಿಗ್ರಾಂ ಆಪ್ ಮೂಲಕ ಮನೆಯಿಂದಲೇ ಕೆಲಸ ಕೊಡುವುದಾಗಿ ಮತ್ತು ಮನಿ ಎಕ್ಸ್'ಚೆಂಜ್ ಮಾಡಿ ಪ್ರತಿ ದಿನ 20% ಲಾಭಾಂಶವನ್ನು ನೀಡುವುದಾಗಿ ನಂಬಿಸಿ ಹಂತ ಹಂತವಾಗಿ ಒಟ್ಟು 9 ರೂ.ಗಳನ್ನು ಆನ್'ಲೈನ್ ಮೂಲಕ ಪಡೆದು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.