ಬೆಂಗಳೂರು ಮೂಲದ ಉದ್ಯಮಿಯನ್ನ ನಂಬಿ ಚಿನ್ನದ ಮೇಲೆ ಹೂಡಿಕೆ ಮಾಡಿದ್ದ ತುಮಕೂರು ನಗರದ ನಾಲ್ವರು ₹7.75 ಕೋಟಿ ಕಳೆದುಕೊಂಡಿದ್ದಾರೆ. ಅಧಿಕ ಮೊತ್ತದ ಹಣ ಕಳೆದುಕೊಂಡ ತುಮಕೂರಿನ ಬಾರ್ ಲೈನ್ ರಸ್ತೆಯ ಅಕ್ಬರ್ ಇಲಿಯಾಜ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು. ಈ ಸಂಬಂಧ ಬೆಂಗಳೂರಿನ ಉದ್ಯಮಿ ಅಬ್ದುಲ್ ಕರೀಂ, ಪತ್ನಿ ಜೀನತ್,ಪುತ್ರ ಮಹಮ್ಮದ್ ಇಬ್ರಾಹಿಂ, ಮಗಳು ಖತೀಜಾ ಫಿಜಾ, ಅಳಿಯ ರಿಜ್ವಾನ್ ವಿರುದ್ದ ಪ್ರಕರಣ ದಾಖಲಾಗಿದೆ.ಚಿನ್ನದ ಮೇಲೆ ಹೂಡಿಕೆ ಮಾಡಿಸಿದ್ದ ಮೇಲಿನ ಆರೋಪಿಗಳು ಆರಂಭದಲ್ಲಿ ಲಾಭಾಂಶವನ್ನು ನೀಡಿದ್ದಾರೆ.ಇದನ್ನ ನೋಡಿ ಉಳಿದವರು ಇವರ ಬಳಿ ಹೂಡಿಕೆ ಮಾಡಿದ್ದಾರೆ. ಬಳಿಕ ಲಾಭ ಇರಲಿ ಅಸಲು ಕೋಡಿ ಎಂದರು ಹಣ ವಾಪಾಸ್ ಕೊಡಲು ಆರೋಪಿಗಳು ನಿರಾಕರಿಸಿದ ಹಿನ್ನಲೆ ಮೋಸ ಹೋಗಿರುವುದು ಗೊತಾಗಿದೆ.