ಹಾಲಿನ ಡೈರಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಹಾಲು ಉತ್ಪಾದಕ ರೈತರು ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶನಿವಾರ ಡೈರಿ ಮತ್ತು ಮುಂದೆ ಜಮಾವಣೆಗೊಂಡು ಡೈರಿಯಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿರುವ ಆರೋಪಿಸಿ ಪ್ರತಿಭಟನೆ ನಡೆಸಿದರು. ಡೈರಿ ಕಾರ್ಯದರ್ಶಿ ಕಾಂತರಾಜು ವಿರುದ್ದ ಆಕ್ರೋಶ ವ್ಯಕ್ತಪಡಿಸಿ ರೈತರ ಹಣ ಗುಳುಂ ಮಾಡಿರುವ ಕಾರ್ಯದರ್ಶಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು. ರೈತರು ಹಾಕಿರುವ ಹಾಲಿಗೆ ಹಣ ನೀಡದ ಕಾರ್ಯದರ್ಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವ್ಯವಹಾರಕ್ಕೆ ರೋಸಿ ಹೋದ ಹಾಲು ಉತ್ಪಾದಕರು, ಡೈರಿ ಮುಂದೆ ತಲೆಯ ಮೇಲೆ ಹಾಲಿನ ಕ್ಯಾನ್ ಹೊತ್ತು ಪ್ರತಿಭಟಿಸಿ, ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು