ಶಿಡ್ಲಘಟ್ಟ ನಗರದಲ್ಲಿ ಶುಕ್ರವಾರ 2024 ಮತ್ತು 25ನೇ ಸಾಲಿನ ಶಾಸಕರ ಅನುದಾನದ ಅಡಿಯಲ್ಲಿ 24 ಮಂದಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನಗಳ ವಿತರಣಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಬಿಎನ್ ರವಿಕುಮಾರ್ ರವರು, ಮುಂದಿನ ದಿನಗಳಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವು ಮುಂದುವರೆಯುತ್ತದೆ. ಹಾಗೆಯೇ ರಾಜ್ಯದಲ್ಲಿ ಎನ್.ಡಿ.ಎ ಮೈತ್ರಿಕೂಟ ಸರ್ಕಾರ ಬರುತ್ತದೆ ಎಂದರು ಜೊತೆಗೆ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಸತ್ಯ,ಆದರೆ ಈಗ ಚೇತರಿಕೆಯನ್ನು ಕಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.