ಕಲಬುರಗಿ : ವೀರಶೈವ ಲಿಂಗಾಯತ ಅಧ್ಯಯನ ಪೀಠ ಸ್ಥಾಪನೆಗಾಗಿ ಸ್ವಾಮೀಜಿಯೊಬ್ಬರು ಕಲಬುರಗಿಯಲ್ಲಿ ಕಣ್ಣಿರಿಟ್ಟ ಘಟನೆ ಆ21 ರಂದು ಮಧ್ಯಾನ 2 ಗಂಟೆಗೆ ಸಂಭವಿಸಿದೆ. ನಗರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಬೀದರ್ ಜಿಲ್ಲೆ ಬೇಮಳಖೇಡ ಗ್ರಾಮದ ಡಾ ರಾಜಶೇಖರ ಶಿವಾಚಾರ್ಯ ಸ್ವಾಮೀಜಿಗಳು ಕಣ್ಣಿರಿಟ್ಟಿದ್ದಾರೆ.. ಹತ್ತು ವರ್ಷಗಳಿಂದ ವೀರಶೈವ ಲಿಂಗಾಯತ ಅಧ್ಯಯನ ಪೀಠಕ್ಕಾಗಿ ಹೋರಾಟ ಮಾಡ್ತಿದ್ದು, ಸರ್ಕಾರ ಬೇಡಿಕೆಗೆ ಸ್ಪಂದಿಸುತ್ತಿಲ್ಲವೆಂದು ಕಣ್ಣಿರು ಹಾಕ್ತಾ ಬೇಸರ ವ್ಯಕ್ತಪಡಿಸಿದರು.. ನಮ್ಮ ಧರ್ಮ ಪರಂಪರೆ ತಿಳಿಸಲು ಕೊನೆಪಕ್ಷ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಆದರೂ ವೀರಶೈವ ಲಿಂಗಾಯತ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ಸ್ವಾಮೀಜಿ ಮನವಿ ಮಾಡಿದ್ದಾರೆ..