ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿಯ ಕಮ್ಮರವಾರಪಲ್ಲಿ ಗ್ರಾಮದಲ್ಲಿ ಕುರಿಗಾಹಿ ಮಂಜುನಾಥ್ ರವರಿಗೆ ಸೇರಿದ ಸುಮಾರು 50ಕ್ಕೂ ಹೆಚ್ಚು ಕುರಿಗಳು ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಇಂದು ಬೆಳಗಿನ ಮಾಹಿತಿಯಂತೆ ಆಕಸ್ಮಕವಾಗಿ ವಿದ್ಯುತ್ ತಂತಿಯು ಕುರಿಶೆಡ್ ಗೆ ತಗುಲಿ ಈ ಅವಘಡ ಸಂಭವಿಸಿರುವುದಾಗಿ ತಿಳಿದು ಬಂದಿದೆ.ಇದರಿಂದಾಗಿ ಜೀವನಾಧಾರವನ್ನು ಕಳೆದುಕೊಂಡಂತಾಗಿ ಮಂಜುನಾಥ ಕುಟುಂಬ ಕಂಗಾಲಾಗಿದೆ.