ಮಳವಳ್ಳಿ : ಸರ್ಕಾರಿ ಶಾಲೆಗಳ ಜೊತೆ ಶಿಕ್ಷಣದ ಉನ್ನತೀಕರಣ ವಾದಾಗ ಮಾತ್ರ ಸದೃಡ ಸ್ವಾಭಿ ಮಾನಿ ಭಾರತ ನಿರ್ಮಾಣ ಸಾಧ್ಯ ಎಂದು ಮಾಜಿ ಸಚಿವ ಬಿಜೆಪಿ ಹಿರಿಯ ನಾಯಕ ಸಿ ಟಿ ರವಿ ಹೇಳಿದ್ದಾರೆ. ಮಳವಳ್ಳಿ ಪಟ್ಟಣದ ಸವಿರುಚಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸರ್ಕಾರಿ ಶಾಲೆಗಳ ಉನ್ನತೀಕರ ಣದ ಹೆಜ್ಜೆಗಳು ಕುರಿತ ವಿಚಾರ ಗೋಷ್ಠಿ, ಚಂದ್ರೋದಯ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ ಮತ್ತು ಚಂದ್ರಶೇಖರ ದಡದಪುರ ಅವರಿಗೆ ಅಭಿನಂದನಾ ಸಮಾರಂ ಭವನ್ನು ಉದ್ಘಾಟಿಸಿ ಮಾತನಾ ಡಿದ ಅವರು ಒಂದು ಕಾಲದಲ್ಲಿ ಶೇ 35 ರಷ್ಟು ಟಿಡಿಪಿ ದರದೊಂದಿಗೆ ಎಲ್ಲರಿಗೂ ಉದ್ಯೋಗಾವಕಾಶ ನೀಡುವ ಸ್ವಾಭಿಮಾನಿ ಭಾರತವಾಗಿತ್ತು ಎಂದರು.