ದೆವ್ವ ಬಿಡಿಸಲು ಎಂದು ಬಂದಿದ್ದ ಸ್ವಾಮೀಜಿ ಒಬ್ಬರು ಸ್ನಾನ ಮಾಡಲು ನದಿಗೆ ಕರಳಿದ್ದ ವೇಳೆ ನೀರು ಪಾಲಾದ ಘಟನೆ ಎಂದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಿಂತಾಮಣಿ ಬಳಿಯ ತುಂಗಭದ್ರಾ ನದಿಯಲ್ಲಿ ಘಟನೆ ನಡೆದಿದೆ. ಆಂಧ್ರಪ್ರದೇಶ ಮೂಲದ ಲಕ್ಷ್ಮಯ್ಯ ಎಂಬ ಸ್ವಾಮೀಜಿ ಖಗ್ರಾಸ್ ಚಂದ್ರ ಗ್ರಹಣದ ಹಿನ್ನೆಲೆ ನದಿ ತೀರದಲ್ಲಿ ಪೂಜೆ ಮಾಡಿ ದೆವ್ವವನ್ನ ಬಿಡಿಸಲು ಬಂದಿದ್ದ ಸೋಮವಾರ ಬೆಳಗ್ಗೆ ನದಿಗೆ ಸ್ನಾನಕ್ಕೆಂದು ತೆರಳಿದ್ದ ವೇಳೆ ನದಿಯಲ್ಲಿ ಮುಳುಗಿ ಸಾವನಪ್ಪಿದ್ದಾನೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.