ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಯುಕೆಪಿ ಕ್ಯಾಂಪ್ ನಲ್ಲಿ ದೊಡ್ಡ ಗಾತ್ರದ ನೀಲಗಿರಿ ಮರವನ್ನು ಸೋಮವಾರ ತಡರಾತ್ರಿ ಮುರಿದು ಬಿದ್ದಿದ್ದರಿಂದ F2-11 ಕೆವಿ ಹುಣಸಗಿ ಲೈನಿನ ಮೇಲೆ ಇದ್ದಿದ್ದರಿಂದ ಕಂಬಗಳು ಮರಿದುಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಾತ್ರಿ ವೇಳೆಯಲ್ಲಿ ಘಟನೆ ಸಂಭವಿಸಿದ್ದರಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಹಗಲು ಹೊತ್ತಿನಲ್ಲಿ ಘಟನೆ ನಡೆದಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ. ಮರ ಮುರಿದು ಬಿದ್ದಿದ್ದರಿಂದ ಬಸವೇಶ್ವರ ವೃತ್ತದ ಸುತ್ತಮುತ್ತಲಿನ ಪ್ರದೇಶ,ಯುಕೆಪಿ ಕ್ಯಾಂಪ್,ಕೆರಿವಡ್ಡ್ ಏರಿಯ,ಬಸವೇಶ್ವರನಗರ ಡಾಲರ್ಸ್ ಕಾಲೋನಿ,ಹುಣಸಗಿ ತಾಂಡ,ಗುಡ್ ಲಕ್ ಹೋಟೆಲ್ ಪ್ರದೇಶ ಕೊಡೆಕಲ್ ಸರ್ಕಲ್ ಸೇರಿ ಅನೇಕ ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.