14 ವರ್ಷದ ಮೇಲ್ಪಟ್ಟು 17 ವರ್ಷದೊಳಗಿನ ಚಾಮರಾಜನಗರ ತಾಲೂಕು ಮಟ್ಟದ ಕ್ರೀಡಾಕೂಟದ ಕಬಡ್ಡಿ ವಿಭಾಗದಲ್ಲಿ ನಗರದ ದೀನಬಂಧು ಶಾಲೆ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ. ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಗರದ ದೀನಬಂಧು ಶಾಲೆಯ ಬಾಲಕರ ತಂಡ ಭಾಗವಹಿಸಿ ಪ್ರಥಮ ಸ್ಥಾನಪಡೆದು ತಾಲೂಕಿಗೆ , ಶಾಲೆಗೆ ಕೀರ್ತಿ ತಂದಿದೆ