ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕವಿತಾಳ ಪಟ್ಟಣದ ಬಳಿಯ ಗುಡಿಹಾಳ ಗ್ರಾಮದ ಬಳಿಯಲ್ಲಿರುವ ತುಂಗಭದ್ರ ಕಾಲುವೆಯಲ್ಲಿ ವ್ಯಕ್ತಿ ಒಬ್ಬನ ಶವ ಪತ್ತೆಯಾಗಿದೆ. ಮಂಗಳವಾರ ಮಧ್ಯಾನ ಗುಡಿಹಾಳ ಗ್ರಾಮದ ತುಂಗಭದ್ರ ಕಾಲುವೆಯ ಬ್ರಿಡ್ಜ್ ಹತ್ತಿರ ಮಾನಪ್ಪ ಎನ್ನುವ 36 ವರ್ಷದ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ. ಮಾನಪ್ಪ ಎನ್ನುವ ವ್ಯಕ್ತಿ ಶನಿವಾರ ಪತ್ನಿಯ ಜೊತೆ ಜಗಳ ಮಾಡಿ ಮನೆ ಬಿಟ್ಟು ಹೋಗಿದ್ದ ಎಂದು ಹೇಳಲಾಗಿದ್ದು ಮಂಗಳವಾರ ಮಧ್ಯಾನ ಕಾಲುವೆಯಲ್ಲಿ ಶವ ಪತ್ತೆಯಾಗಿದೆ. ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.