ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ವಿಶ್ವನಾಥ್ ಅವರು, ಸೌಜನ್ಯ ಕೇಸ್ SIT ತನಿಖೆ ನಡೆಯುತ್ತಿದೆ. ವಿಚಾರವಾದಿಗಳು, ಎಡಚರರು ಮತ್ತು ಯಾರು ಧರ್ಮಸ್ಥಳ ಟಾರ್ಗೆಟ್ ಮಾಡಿದ್ರು. ಅವರಂದುಕೊಂಡಂತೆ ಯಾವುದೇ ಕುರುಹು ದೊರೆತಿಲ್ಲ. ತನಿಖೆ ಸರಿ ಇಲ್ಲ ಅಂತ ಮತ್ತೆ ಇವರು ಪ್ರತಿಭಟನೆ ಮಾಡ್ತಾರೆ. ಕೆಲ ಎಡಚರು SIT ತನಿಖೆ ಸರಿ ಇಲ್ಲ ಅಂತ ಹೇಳಿದ್ದಾರೆ. ಯಾರೋ ಒಬ್ಬರು ಧರ್ಮಸ್ಥಳ ಹುಂಡಿ ಎಣಿಕೆ ಮಾಡಬೇಕು ಅಂತ ಹೇಳಿದ್ದಾರೆ. ಪ್ರಗತಿಪರರು ಸೇರಿದ್ರು, ಸರಿಯಾದ ನ್ಯಾಯ ಕೇಳಬೇಕು. ಇವರಿಗೆ ಧೈರ್ಯ ಇದ್ರೆ, ಮಸೀದಿ, ಚರ್ಚ್‌ಗಳ ಲೆಕ್ಕ ಕೇಳಬೇಕು. ಹಿಂದೂಗಳು ಅಷ್ಟು ಬೇಗ ತಿರುಗಿಬೀಳಲ್ಲ ಅನ್ನೋದು ಗೊತ್ತಿದೆ.