ಬಾಗಲಕೋಟೆ ನಗರದಲ್ಲಿಂದು ಮಾತೃಭೂಮಿ ಯುವಕ ಮಂಡಳದ ವತಿಯಿಂದ ಹಿಂದೂ ಮಹಾಗಣಪತಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು. ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ಹಿಂದೂ ಮಹಾ ಗಣಪತಿಯನ್ನ ಸಾವಿರಾರು ಜನ ಭಕ್ತರು ಅದ್ದೂರಿಯಾಗಿ ಸ್ವಾಗತಿಸಿದರು.ಯುವಕರು ಮಹಿಳೆಯರು ಮಕ್ಕಳು ಡಿಜೆ ಹಾಡುಗಳಿಗೆ ಭರ್ಜರಿ ಹೆಜ್ಜೆ ಹಾಕಿದರು.ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಸಾಥ್ ನೀಡಿದವು.