ತಿಪಟೂರು ಪಟ್ಟಣದ ಏಕಲವ್ಯ ಪ್ರಾವಿಜನ್ ಸ್ಟೋರ್ ಮತ್ತು ಎಸ್. ಎಸ್ ಸೆಕೆಂಡ್ ಹ್ಯಾಂಡ್ ಕಾರ್ ಷೋ ರೂಮ್ ನೀಲಿ ಶೀಟ್ ಒಡೆದು ಒಳ ನುಗ್ಗಿ 2.77 ಲಕ್ಷ ಹಣ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪುಲವಾರಿಪಲ್ಲಿ ಗ್ರಾಮದ ಚಾಲಕ ವೃತ್ತಿ ಹಾಗೂ ಗಾರೆ ಕೆಲಸ ಮಾಡುತ್ತಿದ್ದ ಗ್ರಾಮದ 30 ವರ್ಷದ ಮಹೇಶ್ ಪಿ ಎಸ್ ಅಲಿಯಾಸ್ ಪಿಲ್ಲಿ ಬಂಧಿತ ಆರೋಪಿಯಾಗಿದ್ದಾನೆ.