ಶಾಹುನಗರದ ಬಳಿ ಎಪಿಎಂಸಿ ಠಾಣೆ ಪೊಲೀಸ್‌ರಿಂದ ಗಾಂಜಾ ಸೇವಿಸುತ್ತಿದ್ದ ವ್ಯಕ್ತಿ ಬಂಧನ ಆರೋಪಿತನಾದ ರಾಹುಲ ಜ್ಯೋತಿಭಾ ಜಾಧವ (33) ಶಾಹು ನಗರ ನಗರ ಬೆಳಗಾವಿ ಇವನು ಶಾಹು ನಗರ ಸಾಯಿ ಮಂದಿರ ಹತ್ತಿರ ಅಸಹಜವಾಗಿ ವರ್ತಿಸುತ್ತಿದ್ದ ಬಗ್ಗೆ ಕಂಡು ಬಂದಾಗ ಸದರಿ ವ್ಯಕ್ತಿಯನ್ನು ಹಿಡಿದುಕೊಂಡು ವಿಚಾರಣೆ ಮಾಡಲಾಗಿ ಯಾವುದೋ ಮಾದಕ ಪದಾರ್ಥ ಸೇವನೆ ಮಾಡಿ ವರ್ತಿಸುತ್ತಿರುವಂತೆ ಕಂಡು ಬಂದಿದ್ದರಿಂದ ಇಂದು ರವಿವಾರ 12 ಗಂಟೆಗೆ ಎಪಿಎಂಸಿ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಯವರು ಆರೋಪಿತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಎಪಿಎಂಸಿ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕ್ಕೊಂಡು ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.