ಖಗ್ರಾಸ ಚಂದ್ರಗ್ರಹಣದ ಕೆಂಪು ಚಂದ್ರನನ್ನು ಚಾಮರಾಜನಗದಲ್ಲಿ ಜನರು ಕಣ್ತುಂಬಿಕೊಂಡರು. ಭಾನುವಾರ ರಾತ್ರಿ 11.40 ರಲ್ಲಿ ಕೆಂಪು ಚಂದ್ರನನ್ನು ಕಂಡ ಜನರು ಪುಳಕಿತರಾದರು. ಮೋಡ ಮುಸುಕಿದ ವಾತವರಣ ಇದ್ದಿದ್ದರಿಂದ ಮೋಡದ ಮರೆಯಲ್ಲಿ ನೆರಳು- ಬೆಳಕಿನ ಪ್ರಕೃತಿ ವಿಸ್ಮಯ ನಡೆಯಿತು. ಮಧ್ಯರಾತ್ರಿ 12 ರ ಬಳಿಕ ಕಡುಗೆಂಪು ಬಣ್ಣದ ಚಂದಮಾಮನನ್ನು ಜನರು ಸ್ಪಷ್ಟವಾಗಿ ಕಂಡರು. ಇನ್ನು, ಜನಾರ್ಧನ ದೇಗುಲ ಅರ್ಚಕ ಅನಂತಪ್ರಸಾದ್ ಅವರು ಗ್ರಹಣದ ಸಂದರ್ಭದಲ್ಲಿ ಶಾಂತಿ ಮಂತ್ರ ಪಠಿಸಿ ಯೋಧರು, ರೈತರಿಗೆ ಒಳಿತಾಗಲೆಂದು ಪ್ರಾರ್ಥನೆ ಸಲ್ಲಿಸಿದರು.