ಶಾಸಕರ ಅನುದಾನದಿಂದ ನಿರ್ಮಾಣವಾಗಿರುವ ರಸ್ತೆ ಕಾಮಗಾರಿ ಎರಡು ತಿಂಗಳಿಗೆ ಕಿತ್ತು ಬಂದಿದ್ದು ಇದು 50% ಕಮಿಷನ್ ಸರ್ಕಾರದ ಅಭಿವೃದ್ಧಿ ಕಾರ್ಯ ಎಂದು ಗ್ರಾಮಸ್ಥರು ಬಣ್ಣಿಸಿದ್ದಾರೆ. ಕೋಲಾರ ತಾಲ್ಲೂಕು ಹುತ್ತೂರು ಹೋಬಳಿಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ನೆರನ್ನಹಳ್ಳಿ ಗ್ರಾಮದಿಂದ ವಿಟ್ಟಪ್ಪನಹಳ್ಳಿ ಗ್ರಾಮದವರೆಗೂ ಸುಮಾರು ಎರಡು ಕಿ.ಮಿ ರಸ್ತೆ ಕಾಮಗಾರಿ ನಡೆಸಲಾಗಿದೆ. ರಸ್ತೆ ಕಾಮಗಾರಿ ನಡೆಸಿದ ಎರಡು ತಿಂಗಳಿಗೆ ರಸ್ತೆ ಕಿತ್ತು ಬಂದಿದ್ದು ಗುತ್ತಿಗೆದಾರರ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.ಇದು ಸರ್ಕಾರದ 50% ಕಮಿಷನ್ ಕಾಮಗಾರಿಯಾಗಿದ್ದು ಇದರಲ್ಲಿ ಸರ್ಕಾರದ ಸಚಿವರಿಂದ ಹಿಡಿದು ಶಾಸಕರು ಹಾಗೂ ಅಧಿಕಾರಿಗಳು ಕಮಿಷನ್ ಪಡೆದಿರುವುದರಿಂದ ಗುತ್ತಿಗೆದಾರರ ಕಳಪೆ ಕಾಮಗಾರಿ ನಡೆಸಿದ್ದಾರೆ ಎಂದು ಶುಕ್ರವಾರ ಆರೋಪಿಸಿದ್ರು