ಚಿತ್ರದುರ್ಗ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಹಾಗೂ ಬೆಲೆ ಕುಸಿತಕ್ಕೆ ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ. ಇದರಿಂದ ಲಕ್ಷಾಂತರ ಬಂಡವಾಳ ಹೂಡಿದ್ದ ಈರುಳ್ಳಿ ಬೆಳೆದಿದ್ದ ಅನ್ನದಾತ, ಈರುಳ್ಳಿ ಬೆಳೆಯನ್ನೇ ಸಂಪೂರ್ಣ ನಾಶ ಮಾಡಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಿರೆಮಧುರೆ ಗ್ರಾಮದ ಬಸವರಾಜ್ ತನ್ನ ಆರು ಎಕರೆ ಈರುಳ್ಳಿ ಬೆಳೆ ಟ್ರಾಕ್ಟರ್ ಮೂಲಕ ನಾಶ ಪಡಿಸಿದ್ದಾರೆ. ತನ್ನ ಆರು ಎಕರೆ ಜಮೀನಿನಲ್ಲಿ ಐದಾರು ಲಕ್ಷ ಹಣ ಬಂಡವಾಳ ಹೂಡಿ ಈರುಳ್ಳಿ ಬೆಳೆ ಬೆಳೆದಿದ್ದರು. ಆದರೆ ದಿಢೀರ್ ಬೆಲೆ ಕುಸಿತಕ್ಕೆ ರೈತ ಬಸವರಾಜ್ ಮನನೊಂದು ಟ್ರಾಕ್ಟರ್ ಹರಿಸುವ ಮೂಲಕ ಸಂಪೂರ್ಣ ನಾಶ ಪಡಿಸಿದ್ದಾರೆ. ಇನ್ನೂ ಸ್ಥಳಕ್ಕೆ ಚಳ್ಳಕೆರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು