ಚಿತ್ರದುರ್ಗದಲ್ಲಿಂದು ಬೃಹತ್ ಬೈಕ್ ರ್ಯಾಲಿಯನ್ನ ಹಮ್ಮಿಕೊಳ್ಳಲಾಗಿತ್ತು. ಇನ್ನೂ ವಿಶ್ವ ಹಿಂದೂ ಪರಿಷದ್ ಭಜರಂಗದಳ ಇವರ ವತಿಯಿಂದ ಹಿಂದೂ ಮಹಾ ಗಣಪತಿಯನ್ನ ಪ್ರತಿಷ್ಟಾಪನೆ ಮಾಡಿದ್ದು ಸೆಪ್ಟೆಂಬರ್ 13 ರಂದು ಹಿಂದೂ ಮಹಾ ಗಣಪತಿಯ ವಿಸರ್ಜನೆ ಬೃಹತ್ ಶೋಭಾಯಾತ್ರೆ ಹಮ್ಮಿಕೊಂಡಿದ್ದು ಈ ಹಿನ್ನೆಲೆ ಗುರುವಾರ ಮಧ್ಯಾಹ್ನ 12 ಗಂಟೆಗೆ ಬೃಹತ್ ಬೈಕ್ ರ್ಯಾಲಿಯನ್ನ ಹಮ್ಮಿಕೊಂಡಿದ್ದು ನಗರದ ಕನಕ ವೃತ್ತದಲ್ಲಿ ಮಾದಾರ ಚನ್ನಯ್ಯ ಗುರುಪೀಠದ ಬಸವ ಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಆಗಮಿಸಿ ಬೈಕ್ ರ್ಯಾಲಿಗೆ ಚಾಲನೆಯನ್ನ ನೀಡಿದ್ದಾರೆ