ಶಿವಮೊಗ್ಗ ಜಿಲ್ಲಾ ಭದ್ರಾವತಿ ತಾಲೂಕಿನ ಜಂಕ್ಷನ್ ಬಳಿ ಕಾರೊಂದು ಮಗುಚಿ ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ. ಇನ್ನ ಸಾಗರ ಮೂಲದವರಿಗೆ ಸೇರಿದ ಕಾರು ಎಂದು ತಿಳಿದುಬಂದಿದ್ದು,ಕಾರಿನಲ್ಲಿ ಯುವಕ ಯುವತಿ ತೆರಳುತ್ತಿದ್ದರು. ಕಾರು ಚಲಾಯಿಸುತ್ತಿದ್ದ ಯುವಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಪಕ್ಕದಲ್ಲಿ ಮಗುಚಿ ಬಿದ್ದಿದೆ. ಈ ಅಪಘಾತದ ರಭಸಕ್ಕೆ ಯುವಕ ಗಂಭೀರವಾಗಿ ಗಾಯಗೊಂಡಿದ್ದು,ಯುವತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದು, ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.