ಕಲಬುರಗಿ : ಕಲಬುರಗಿ ನಗರದ ಕೋಲ್ಕತಾ ಫಂಕ್ಷನ್ ಹಾಲ್‌ನಲ್ಲಿಂದು ಅಲ್ಪಸಂಖ್ಯಾತರ ಜಾತಿ ಗಣತಿ ಜಾಗೃತಿ ಸಭೆ ಏರ್ಪಡಿಸಲಾಗಿತ್ತು.. ಸಭೆಗೆ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾದ ಹಾಗೂ ಕೆಬಿಎನ್ ದರ್ಗಾದ ಪೀಠಾಧಿಪತಿ ಸೈಯದ್ ಅಲೀ ಅಲ್ ಹುಸೇನಿ ಅವರನ್ನ ಅಹ್ವಾನಿಸದಕ್ಕೆ ರೊಚ್ಚಿಗೆದ್ದ ಬೆಂಬಲಿಗರು ಕುರ್ಚಿಗಳನ್ನ ಮುರಿದು ಹಾಕಿ ದೊಡ್ಡಮಟ್ಟದ ಗಲಾಟೆ ಮಾಡಿದ ಘಟನೆ ಆಗಷ್ಟ್ 5 ರಂದು ಸಂಜೆ 4 ಗಂಟೆಗೆ ಸಂಭವಿಸಿದೆ.. ಸಭೆಯಲ್ಲಿ ವಕ್ಫ್ ಬೋರ್ಡ್ ಸದಸ್ಯರಾದ ಅನ್ವರ್ ಪಾಶಾ, ಅಬ್ದುಲ್ ರಿಯಾಜ್ ಸೇರಿದಂತೆ ಇತರರು ಭಾಗಿಯಾಗಿದ್ದರು.. ಆದರೆ ಸಭೆಗೆ ವಕ್ಪ್ ಬೋರ್ಡ್ ರಾಜ್ಯಾಧ್ಯಕ್ಷರಾದ ಸೈಯದ್ ಅಲೀ ಅಲ್ ಹುಸೇನಿರನ್ನ ಅಹ್ವಾನಿಸದ ಹಿನ್ನಲೆಯಲ್ಲಿ ಕೆರಳಿದ ಬೆಂಬಲಿಗರು ಪೀಠೋಪಕರಣಗಳನ್ನ ಮುರಿದುಹಾಕಿ ರಣಾಂಗಣ ಮಾಡಿದಾರೆ.