ಬೇತಮಂಗಲದ ಮಾಗೊಂದಿ ಗೇಟ್ ಬಳಿ ನೆಲೆಗೊಂಡಿರುವ ಶಿವಶನೇಶ್ವರ ದೇವಾಲಯದ 5ನೇ ವರ್ಷದ ವಾರ್ಷಿಕ ಮಹೋತ್ಸವವು ಶನಿವಾರದಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಐದನೇ ವರ್ಷ ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ಪೂಜಾ ಕಾರ್ಯಕ್ರಮಗಳನ್ನು ದೇವಾಲಯದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಶ್ರದ್ಧಾ ಭಕ್ತಿಯಿಂದ ದೇವರನ್ನು ಪ್ರಾರ್ಥಿಸಿಕೊಂಡರು. ಬೆಳಿಗ್ಗೆ ಯಿಂದಲೆ ವಿಶೇಷ ಹೂಗಳಿಂದ ಶಿವ, ಶನೇಶ್ವರ, ಆಂಜನೇಯ, ವೆಂಕಟೇಶ್ವರ ಸ್ವಾಮಿ, ಅಯ್ಯಪ್ಪ ಸ್ವಾಮಿ, ಓಂ ಶಕ್ತಿ, ನವಗ್ರಹ ದೇವತೆಗಳು ಸೇರಿದಂತೆ ಇಲ್ಲಿ ನೆಲೆಗೊಂಡಿರುವ ಎಲ್ಲಾ ದೇವರುಗಳಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು.