ಸಹಜವಾಗಿ ಗಣೇಶೋತ್ಸವ ಎಂದರೆ ಅಲ್ಲಿ ಯುವಕರ ಕಾರುಬಾರು, ಮಕ್ಕಳ ಕಲರವ ಇz್ದೆÃ ಇರುತ್ತೆ. ಆದರೆ ಇಲ್ಲಿ ಕೇವಲ ಬಳೆ ಸದ್ದು, ಕಾಲ್ಗೆಜ್ಜೆಯ ನಿನಾದ ಮಾತ್ರ ಕೇಳಿಸುತ್ತಿದೆ. ಅದೇಕೆ ಹಾಗೆ ಅಂತೀರಾ, ಅಲ್ಲಿರೋದೆಲ್ಲ ಮಹಿಳೆಯರೇ ಆಗಿರುವಾಗ ಯುವಕರ ಕಾರುಬಾರು ಎಲ್ಲಿಂದ ಬರಲು ಸಾ`À್ಯ, ಅರೇ ದೆಲ್ಲಿ ಪ್ರಮೀಳಾ ರಾಜ್ಯ ಅಂತೀರಾ, ಚಿಕ್ಕಬಳ್ಳಾಪುರದ ೨೯ನೇ ವಾರ್ಡಿನ ದ್ಯಾವಪ್ಪ ಬಡಾವಣೆಯಲ್ಲಿ. ಇಲ್ಲಿ ಇದೇ ಮೊದಲ ಬಾರಿಗೆ ಗಣೇಶೋತ್ಸವ ನಡೆಸುತ್ತಿದ್ದು, ಮಹಿಳೆಯರೇ ಸೇರಿ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಜಿಲ್ಲೆಯ ಪ್ರಥಮ ಮಹಿಳಾ ಗಣೇಶೋತ್ಸವ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ದ್ಯಾವಪ್ಪ ಬಡಾವಣೆಯ ಮಹಿಳೆಯರು ಬಹುತೇಕ ಮನೆಗಳಲ್ಲಿಯೇ ಕಾಲ ಕಳೆಯುತ್ತಾರೆ.