ಕೊಪ್ಪಳ ಜಿಲ್ಲೆಯ ಹುಲಿಗಿ ಗ್ರಾಮದಲ್ಲಿ ತುಂಗಭದ್ರಾ ಆರತಿ ಮಹೋತ್ಸವದ ನಿಮಿತ್ತ ಕುಂಭ ಮೆರವಣಿಗೆ ಇಂದು ನಡೆಯಿತು. ಆಗಸ್ಟ್ 26 ರಂದು ಸಂಜೆ ,5-00 ಗಂಟೆಗೆ ನಡೆದ ಕುಂಭ ಮೆರವಣಿಗೆ ಮಳೆರಾಯ ಅಡ್ಡಿ ಮಾಡಿದರು ಮಹಿಳೆಯರು ಸುರಿಯುವ ಮಳೆಯಲ್ಲಿ ಕುಂಭ ಹೊತ್ತು ತುಂಗಭದ್ರಾ ನದಿಯ ಕಡೆಗೆ ಹೆಜ್ಜೆ ಹಾಕಿದರು. ತುಂಗಭದ್ರಾ ಆರತಿ ಮಹೋತ್ಸವಕ್ಕೆ ಮಳೆ ಸುರಿಯುವ ಶುಭ ಸೂಚನೆ ನೀಡಿ ಮಳೆರಾಯನ ಆಶಿರ್ವಾದ ಆಗಿದೆ ಎಂದು ಭಕ್ತರು ಅನಿಸಿಕೆಯಾಗಿದೆ