ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಸ್ಥಳ ನೀಡಲು ನಿರಾಕರಣೆಗೆ ಶಾಸಕಿ ರೂಪಕಲಾ ಬೇಸರ ಬೇತಮಂಗಲ : ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕ, ಅಂಗನವಾಡಿ, ಓವರ್ ಹೆಡ್ ಟ್ಯಾಂಕ್ ಇತರೆ ಮೂಲಭೂತ ಸೌಕರ್ಯ ಒದಗಿಸಲು ಜಮೀನು ಕೊರತೆ ಇರುತ್ತದೆ ಆದರೆ ದಾನಿಗಳ ಸಹಕಾರ ದಿಂದ ಸರ್ಕಾರದ ಸವಲತ್ತುಗಳನ್ನು ಜನ ಸಾಮಾನ್ಯರಿಗೆ ಒದಗಿಸಲು ವಿಳಂಭವಾಗುತ್ತಿದೆ ಎಂದು ಶಾಸಕಿ ಎಂ.ರೂಪಕಲಾ ಬೇಸರ ವ್ಯಕ್ತಪಡಿಸಿದರು. ಕೆಜಿಫ್ ತಾಲ್ಲೂಕಿನ ಕಮ್ಮಸಂದ್ರ ಗ್ರಾಪಂಯ ಯರನಾಗನಹಳ್ಳಿ ಗ್ರಾಮದಲ್ಲಿ ಸುಮಾರು ೧೨ ಲಕ್ಷ ರೂ. ವೆಚ್ಛದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅನೇಕ ವರ್ಷಗಳಿಂದ ಗ್ರಾಮನದಲ್ಲಿ ಶುದ್ಧ ಕುಡಿಯುವ ನೀ