ಕಲಬುರಗಿ : ಅತಿಯಾದ ಮಳೆಯಿಂದ ಸೇಡಂ ತಾಲೂಕಿನಲ್ಲಿ ಹಾನಿಯಾದ ಹೆಸರು ಬೆಳೆಯನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ್ ವೀಕ್ಷಣೆ ಮಾಡಿದರು. ಆ31 ರಂದು ಮಧ್ಯಾನ 1 ಗಂಟೆಗೆ ವಿಕ್ಷಣೆ ಮಾಡಿದ ಅವರು, ಸತತವಾಗಿ ಸುರಿದ ಮಳೆಯಿಂದ ಬೆಳೆ ನಷ್ಟದಲ್ಲಿ ಪ್ರಮುಖ ಹೊಲಗಳಿಗೆ ತೆರಳಿದ ಸಚಿವ ಶರಣಪ್ರಕಾಶ ಪಾಟೀಲ ಹೆಸರು ಹಾಗೂ ತೊಗರಿ ಬೆಳೆಗಳನ್ನು ಪರಿಶೀಲನೆ ನಡೆಸಿದರು. ಇನ್ನೂ ಜೊತೆಯಲ್ಲಿದ್ದ ಕೃಷಿ ಅಧಿಕಾರಿಗಳಿಗೆ ಬೆಳೆ ಹಾನಿ ಬಗ್ಗೆ ಪ್ರಾಥಮಿಕ ವರದಿಯನ್ನು ನೀಡುವಂತೆ ಸೂಚನೆ ನೀಡಿದರು.