ಪಟ್ಟಣದ ಕೆಂಪಯ್ಯನ ಮಠದಲ್ಲಿರುವ ರಾಚೋಟೇಶ್ವರ ದೇವರಿಗೆ ಶ್ರಾವಣ ಸಮಾಪ್ತಿ ಅಂಗವಾಗಿ ಸೋಮವಾರ ಸಂಜೆ 4ಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಕಳೆದ ಒಂದು ತಿಂಗಳ ಪರ್ಯಂತ ನಡೆದ ಭಜನೆ ಕಾರ್ಯಕ್ರಮ ಇಂದಿನ ಪೂಜೆಯೊಂದಿಗೆ ಸಮಾಪ್ತಿ ಕೈಗೊಳಿಸಲಾಯಿತು. ಒಂದುವರೆ ದಶಕದಿಂದ ಶ್ರೀಮಠಕ್ಕೆ ಆಗಮಿಸುತ್ತಿರುವ ಭಕ್ತೆ ಹಳ್ಳಿ ಖೇಡಕರ್ ತಮ್ಮ ಅನುಭವ ಹಂಚಿಕೊಂಡರು. ಬಳಿಕ ಶ್ರೀಮಠದ ಪ್ರಧಾನ ಅರ್ಚಕ ಶಿವಶರಣಪ್ಪ ಗುಡ್ಡಾ ಮಠದ ಇತಿಹಾಸ ವಿವರಿಸಿದರು.