ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಎಸ್ ಎಲ್ ಟಿ ರೈಸ್ ಮಿಲ್ ಮೇಲೆ ಶುಕ್ರವಾರ ರಾತ್ರಿಯಿಂದ ಶನಿವಾರ ರಾತ್ರಿ ಅವರಿಗೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಅಕ್ಕಿ ಪತ್ತೆ ಮಾಡಿದ್ದಾರೆ. ದಾಸ್ತಾನು ಮಾಡಿರುವ ಅಕ್ಕಿಗೆ ಯಾವುದೇ ರೀತಿಯಾದ ದಾಖಲೆ ಲಭಿಸಿಲ್ಲ ಎಂದು ತಿಳಿದುಬಂದಿದೆ.ಪಡಿತರ ಅಕ್ಕಿ ಇರಬಹುದು ಎಂದು ಹೇಳಲಾಗುತ್ತಿದ್ದು ಇದೇ ಅಕ್ಕಿ ಪಾಲಿಶ್ ಮಾಡಿ ನಕಲಿ ಕಂಪನಿಗಳ ಹೆಸರಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.ಇದರ ಕುರಿತು ಎಸ್ಪಿ ಪೃಥ್ವಿಕ್ ಶಂಕರ್ ಅವರು ಮಾಹಿತಿ ನೀಡಿ,ಪರಿಶೀಲನೆ ಮುಗಿದ ನಂತರ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.ಸ್ಥಳಕ್ಕೆ ಸಹಾಯಕ ಆಯುಕ್ತ ಶ್ರೀಧರ್ ಗೋಟೂರ,ಡಿವೈಎಸ್ಪಿ ಸುರೇಶ್,ಆಹಾರ ಇಲಾಖೆ ಎ.ಡಿ ಅನಿಲಕುಮಾರ ಭೇಟಿ ನೀಡಿದ್ದಾರೆ.