ಹಣದ ಅವಶ್ಯಕತೆ ಇದೆ ಎಂದು ಹೇಳಿ ಹಣ ಪಡೆದು ಹಣಕ್ಕೆ ಬದಲಾಗಿ ಜಮೀನು ಬರೆದುಕೊಡುವುದಾಗಿ ನಂಬಿಸಿ ಕೊನೆಗೆ ಹಣವೂ ಇಲ್ಲ ಜಮೀನೂ ಇಲ್ಲದೆ 17ವರ್ಷಗಳಿಂದ ಪರದಾಡುತ್ತಿರುವ ದಲಿತ ಮಹಿಳೆಗೆ ನ್ಯಾಯಸಿಗದಿದ್ದರೆ ತಾಲೂಕು ಕಚೇರಿ ಮುಂದೆ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಿಪಬ್ಲಿಕ್ ಸಂಘಟನೆ ರಾಜ್ಯಾಧ್ಯಕ್ಷ ಚಿಕ್ಕನಾರಾಯಣ ಎಚ್ಚರಿಕೆ ನೀಡಿದ್ದಾರೆತಾಲೂಕಿನ ಬೂದಿಕೋಟೆ ಗ್ರಾಮದ ವಂಚನೆಗೊಳಗಾಗಿರುವ ಜಮೀನಿನಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ ಗ್ರಾಮದ ಸರ್ವೆ ನಂ 10ರಲ್ಲಿ ಒಂದು ಎಕರೆ 2 ಗುಂಟೆ ಜಮೀನನ್ನು 2008ರಲ್ಲಿ ಗ್ರಾಮದ ಮುನಿಯಪ್ಪಶೆಟ್ಟಿ ಎಂಬುವರು ದಲಿತ ಕುಟುಂಬದ ಶಿಕ್ಷಕರಾಗಿದ್ದ ಶ್ರೀರಾಮಚಂದ್ರ ಎಂಬುವ ರಿಂದ 1ಲಕ್ಷ ಹಣ ಪಡೆದು ಹಣಕ್ಕೆ ಬದಲಾಗಿ ಜಮೀನು ಬರೆದುಕೊಡುವುದಾಗಿ ತಿಳಿಸಿ ಮೋಸಮಾಡಿದ್ದಾರೆ ಎಂದರು