KR ಮಾರ್ಕೆಟ್ ಅಲ್ಲಿ ಆಗಸ್ಟ್ 24 ರ ಸಂಜೆ 6 ಗಂಟೆಗೆ 8 ವರ್ಷದ ಬಾಲಕನ ಮೇಲೆ BMTC ಬಸ್ ಹರಿದಿದೆ ಎನ್ನಲಾಗಿತ್ತು. ಬಿಎಂಟಿಸಿ ಚಾಲಕನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತ ಆಗಿತ್ತು. ಆದ್ರೆ ಆ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಬಿಎಂಟಿಸಿ ಬಸ್ ಸನಿಹವೇ ಬೈಕ್ ಸವಾರ ಬಂದು ಬಿದ್ದಿದ್ದು ಬಸ್ ಚಾಲಕನ ತಪ್ಪು ಇಲ್ಲದೇ ಇರುವುದು ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯದ ಪ್ರಕಾರ ಬಿಎಂಟಿಸಿ ಬಸ್ ಚಾಲಕನ ತಪ್ಪಿಲ್ಲದೇ ಇರುವುದು ತಿಳಿದು ಬಂದಿದೆ