ಐದನೇ ದಿನ ಗಣಪತಿ ವಿಸರ್ಜನೆ ವೇಳೆ ಮೆರವಣಿಗೆಯಲ್ಲಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ ಯುವಕ ಹೃದಯಘಾತಕ್ಕೆ ಬಲಿಯಾಗಿರುವುದು ಘಟನೆ ರಾಯಚೂರು ನಗರದಲ್ಲಿ ವರದಿಯಾಗಿದೆ. ನಗರದ ಕುಲಸುಂಬಿ ಕಾಲೋನಿಯ ನಿವಾಸಿ ಆಂಜನೇಯ (35) ಹೃದಯಾಘಾತಕ್ಕೆ ಬಲಿಯಾದ ದುರ್ದೈವಿ. ಆಗಸ್ಟ್ 31 ರ ರವಿವಾರ ತಡರಾತ್ರಿ ಕುಣಿದಾಡಿದ ಯುವಕನಿಗೆ ತೀವ್ರ ಆಯಾಸವಾಗಿತ್ತು, ನಂತರ ಮನೆಗೆ ಹೋಗಿ ವಿಶ್ರಾಂತಿ ಪಡೆದಿದ್ದರು. ಆದರೆ ಸೆ.1 ರ ಸೋಮವಾರ ಬೆಳಗಿನ ಜಾವ ಐದು ಗಂಟೆಗೆ ತೀವ್ರ ಆಯಾಸವಾದ ಕಾರಣ ಸ್ಥಳೀಯ ಆಸ್ಪತ್ರೆಗೆ ಹೊರಡುವ ಮಾರ್ಗಮಧ್ಯ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮೃತನಿಗೆ ಇಬ್ಬರು ಪುತ್ರಿ, ಓರ್ವ ಪುತ್ರನಿದ್ದ ಎನ್ನಲಾಗಿದೆ.