ಡಿಕೆಶಿ ಬೆಂಬಲಿಗರ ಕೇಸ್ ವಾಪಾಸ್ ಪಡೆದ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಿವಾನಂದ ಸರ್ಕಲ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಸಣ್ಣಪುಟ್ಟ ಕೇಸ್ ಇರ್ತಾವೆ ಅವುಗಳನ್ನ ವಾಪಾಸ್ ಪಡೆಯಲಾಗಿದೆ. ಪೊಲೀಸ್ ಠಾಣೆ ಮುಂದೆ, ಡಿಸಿ ಆಫೀಸ್ ಮುಂದೆ ಪ್ರತಿಭಟನೆ ಮಾಡಿರ್ತಾರೆ, ಸಣ್ಣಪುಟ್ಟ ಕೇಸ್‌ಗಳು ಆದರೆ ಪಟ್ಟಿ ದೊಡ್ಡದಿದೆ. ಪೊಲೀಸ್ ನೈತಿಕ ಸ್ಥೈರ್ಯ ಏನು ಕುಗ್ಗಲ್ಲ. ಪೊಲೀಸರೇ ಕೇಸ್ ಹಿಂಪಡೆಯಬಹುದೆಂದು ವರದಿ ಕೊಟ್ಟಿರುತ್ತಾರೆ ಪೊಲೀಸರು ಹಿಂಪಡೆಯಬಹುದು ಎಂದಾಗ ವಾಪಾಸ್ ಪಡೆಯಬಹುದು. ಎರಡು ವರ್ಷದಿಂದ ಈ ಪೈಲ್ ಓಡಾಡುತ್ತಿತ್ತು. ನಮ್ಮ ಪಕ್ಷ ಹೊರತುಪಡಿಸಿ ಬೇರೆಯವ್ರು ಇದ್ದಾರೆ. ರೈತ ಸಂಘ ಕನ್ನಡಪರ ಸಂಘಟನೆಗಳ ಕೇಸ್‌ಗಳು ಕೂಡ ಇವೆ ಎಂದರು.