ಗೌಡನಬಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಾಗರ ಕ್ಯಾಂಪ್ ಹಾಗೂ ನಾಗರೆಡ್ಡಿ ಕ್ಯಾಂಪಿನಲ್ಲಿ ಸಮರ್ಪಕವಾದ ಸ್ಮಶಾನ ಭೂಮಿಯಿಲ್ಲದೇ ಅಂತ್ಯ ಸಂಸ್ಕಾರಕ್ಕಾಗಿ ಸೆ.4 ರ ಗುರುವಾರ ಪರದಾಡುವಂತಾಯಿತು. ಗೌಡನಬಾವಿಯಲ್ಲಿ 1200 ಮತದಾರರು ಇದ್ದು ಕೇವಲ ಅರ್ಧ ಎಕರೆ ಸ್ಮಶಾನ ಭೂಮಿ ಇದೆ. ಈ ಜಾವದಲ್ಲಿ ಯಾರಿಗೂ ಸಾಲುತ್ತಿಲ್ಲ. ಸುಮಾರು ವರ್ಷಗಳಿಂದ ಸಾಗರ್ ಕ್ಯಾಂಪ್ ಹಾಗೂ ನಾಗರೆಡ್ಡಿ ಕ್ಯಾಂಪಿನ ಎಲ್ಲಾ ಜನಾಂಗದವರಲ್ಲಿ ಯಾರಾದರೂ ಸತ್ತರೆ ಅವರ ಅಂತ್ಯಸಂಸ್ಕಾರ ಮಾಡಲು ಪರದಾಡಬೇಕಿದೆ. ಒಂದು ಕಿಲೋಮೀಟರ್ ದೂರ ಗದ್ದೆಯಲ್ಲೇ ಹೆಣವನ್ನು ಹೊತ್ತೊಯ್ಯಬೇಕಿದೆ. ಭತ್ತ ಬೆಳೆ ಬೆಳೆದ ರೈತರು ಈ ಗದ್ದೆಗಳಿಂದ ಹೋಗಲು ದಾರಿ ಬಿಡದೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಸರ್ಕಾರ ಪ್ರತಿಯೊಂದು ಗ್ರಾಮಕ್ಕೂ ಸ್ವಂ