ನನ್ನ ಗಂಡ ಒಳ್ಳೆಯವರು, ಅವರ ಬಂಧನ ವಿಷಯ ಟಿವಿ ಮೂಲಕವೇ ತಿಳಿಯಿತು ಎಂದು ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಬಂಧಿತನಾಗಿತುವ ಚಿನ್ನಯ್ಯ ಎರಡನೇ ಪತ್ನಿ ಮಲ್ಲಿಕಾ ಹೇಳಿದರು. ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಸತ್ಯಮಂಗಲಂ ತಾಲೂಕಿನ ಗ್ರಾಮವೊಂದರಲ್ಲಿ ಮಲ್ಲಿಕಾ ಸೋಮವಾರ ಮಾತನಾಡಿ, ಮೊದಲನೇ ಪತ್ನಿ ಆತನನ್ನು ತೊರೆದು 6 ವರ್ಷದ ಬಳಿಕ ನನ್ನನ್ನು ವಿವಾಹವಾಗಿದ್ದರು. ವಿವಾಹದ ಸಂದರ್ಭದಲ್ಲಿ ಧರ್ಮಸ್ಥಳದ ಮ್ಯಾನೇಜರ್ ಒಬ್ಬರು ಚಿನ್ನಯ್ಯ ಒಳ್ಳೆಯವನು ಎಂದು ಲೆಟರ್ ಕೂಡ ಕೊಟ್ಟಿದ್ದರು. ನಾನು ಕೂಡ ಚಿನ್ನಯ್ಯನ ಜೊತೆ ಧರ್ಮಸ್ಥಳದಲ್ಲಿ ಸ್ವಚ್ಛ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದೆವು ಎಂದರು. ನನ್ನ ಗಂಡ ಯಾವ ತಪ್ಪು ಮಾಡಿಲ್ಲ ಎಂದರು.