ಯಕ್ಲಾಸಪೂರದಲ್ಲಿ ಸಾಲ ಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಯಕ್ಲಾಸಪೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಈಶಪ್ಪ ಶ್ಯಾನವಾಡ (54) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು, ಕೆ.ವ್ಹಿ.ಜಿ ಬ್ಯಾಂಕ್ ನಲ್ಲಿ ರೈತ 12 ಲಕ್ಷ ಬೆಳೆ ಸಾಲ ಪಡೆದಿದ್ದ ಎನ್ನಲಾಗುತ್ತಿದೆ. ಹೆಸರು ಬೆಳೆ ಮಳೆಗೆ ಸರ್ವನಾಶ ಆಗಿತ್ತು. ಹೀಗಾಗಿ ಸಾಲದ ಸುಳಿಗೆ ಸಿಲುಕಿದ ರೈತ ಜಮೀನನಲ್ಲಿ ವಿಷ ಸೇವಿಸಿದ್ದ.