ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎನ್ ಐಎ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಧ್ಯಾಹ್ನ 1:30 ರ ಸುಮಾರಿಗೆ ಸದಾಶಿವ ನಗರದ ಇಲ್ಲ ಮಾಧ್ಯಮಗಳ ಜೊತೆ ಮಾತನಾಡಿದ ಗೃಹಬಸಚಿವ ಪರಮೇಶ್ವರ್ ಅವರು, ಈ ಬಗ್ಗೆ ಈಗಾಗಲೇ ಎಸ್ ಐಟಿ ತನಿಖೆ ಮಾಡ್ತಿದೆ, ಅವರು ಬೇರೆ ಧಿಕ್ಕಿಗೆ ಕೊಂಡೊಯ್ತಿದ್ದಾರೆ. ಪ್ರಕರಣವನ್ನ ಎನ್ ಐಎ ತನಿಖೆಗೆ ಕೊಡುವ ವಿಚಾರ ಇಲ್ಲ. ಅವರು ತನಿಖೆ ಮಾಡೋದಿದ್ದರೆ ಮಾಡಲಿ. ಅವರದ್ದೇ ಬೇರೆ ಆ್ಯಂಗಲ್ ನಲ್ಲಿ ಮಾಡಲಿ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಧರ್ಮಸ್ಥಳದ ವಿಚಾರ ಎಸ್ ಐಟಿಗೆ ಕೊಟ್ಟಿದ್ದೇವೆ. ತನಿಖೆ ಮುಗಿಯುವವರೆಗೆ ಏನೂ ಕೊಡೋದಿಲ್ಲ. ಅವರ ಉದ್ದೇಶ ಏನಿದೆ ಗೊತ್ತಿಲ್ಲ, ತನಿಖೆಗೆ ಅಡ್ಡಿಮಾಡುವ ಪ್ರಯತ್ನ ಬರಬಹುದು. ತನಿಖೆಯಲ್ಲಿ ತಪ್ಪಿದ್ದರೆ ಇನ್ನೊಂದು ಏಜೆನ್ಸಿ ಬರುತ್ತೆ.