ಬ್ರಹ್ಮಾವರದಲಿ ತಾಯಿ,ಮಗು ನೇಣು ಬಿಗಿದು ಆತ್ಮಹತ್ಯೆಯನ್ನು ಮಾಡಿಕೊಂಡ ಬಗ್ಗೆ ಎಸ್ಪಿ ಹರಿರಾಮ ಶಂಕರ್ ಮಾಹಿತಿಯನ್ನು ನೀಡಿದ್ದು, ಆರೂರು ಗ್ರಾಮದಲ್ಲಿ ತಾಯಿ ಮತ್ತು ಮಗು ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆಯ ಕಾರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ತನ್ನ ಗಂಡನಿಗೆ ಕೊಲೆಯತ್ನದ ಕೇಸ್‌ನಲ್ಲಿ ಕೆಳ ನ್ಯಾಯಾಲಯದಲ್ಲಿ ಆರೋಪಿ ಎಂದು ಸಾಬೀತಾಗಿತ್ತು. ಇದನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದ ಕಾರಣ ಮನನೊಂದ ಪತ್ನಿ ತನ್ನ ಮಗುವನ್ನು ಮೊದಲು ನೇಣಿಗೆ ಹಾಕಿ ಬಳಿಕ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.