ಕೇಂದ್ರದ ಜಿಎಸ್ ಟಿ ಇಳಿಕೆ ವಿಚಾರಕ್ಕೆ ಸಂಬಂಧಿಸಿ ಗುರುವಾರ ಸಚಿವ ಸಂಪುಟ ನಂತರ ಸಂಜೆ 4 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಕೇಂದ್ರ ಸರ್ಕಾರ ಜಿಎಸ್ ಟಿ ತಂದು, ಜನರಿಗೆ ಸಾಕಷ್ಟು ಹೊರೆ ಹಾಕಿದ್ದರು. ಬಡವರು,ಮಧ್ಯಮ ವರ್ಗದ ಮೇಲೆ ಹೊಡೆತ ಆಗಿತ್ತು. ನಮ್ಮಿಂದ 4.5 ಲಕ್ಷ ಕೋಟಿ ಹೋಗ್ತಿತ್ತು. ಅವರು ನಮಗೆ ಕೊಡುವುದು ಕಡಿಮೆ. ನಮಗೆ 15 ಸಾವಿರ ಕೋಟಿ ಕೊರತೆಯಾಗುತ್ತೆ. ಇದನ್ನ ಕೇಂದ್ರ ಸರ್ಕಾರ ಕೊಡಬೇಕು. ನಮಗೆ ಅಷ್ಟೇ ಅಲ್ಲ ಎಲ್ಲ ರಾಜ್ಯಗಳಿಗೆ ಕೊಡಬೇಕು ಎಂದರು.