ಬೆಳಗಾವಿ ನಗರದಲ್ಲಿ ಶನಿವಾರ ತಡರಾತ್ರಿ ಜೈ ಮಹಾರಾಷ್ಟ್ರ ಡಿಜೆ ಸಾಂಗ್ ಹಚ್ಚಿ ಉದ್ಧಟತನ ಪ್ರದರ್ಶನ ಮಾಡಿರೋ ಎಂಇಎಸ್ ಕಾರ್ಯಕರ್ತರು ಗಣೇಶೋತ್ಸವ ಮೆರವಣಿಗೆಯಲ್ಲಿ ಮಹಾರಾಷ್ಟ್ರ ನಾಡಗೀತೆ ಹಚ್ಚಿ ಡ್ಯಾನ್ಸ್ ಮಾಡುವ ಮೂಲಕ ಬೆಳಗಾವಿ ನಗರದ ಪಾಟೀಲ್ ಗಲ್ಲಿ ಗಣೇಶ ಮಂಡಳಿ ಮೆರವಣಿಗೆಯಲ್ಲಿ ಈ ಘಟನೆ ನಡೆದಿದ್ದು ಜೈ ಜೈ ಮಹಾರಾಷ್ಟ್ರ ಮಾಂಝಾ ( ನನ್ನ ಮಹಾರಾಷ್ಟ್ರಕ್ಕೆ ಜಯವಾಗಲಿ) ಎಂಬ ಡಿಜೆ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ ಸ್ಥಳೀಯರೊಬ್ಬರು ಮೊಬೈಲ್ ವಿಡಿಯೋ ಸೆರೆ ಹಿಡಿದಿದ್ದು ನಾಡದ್ರೋಹಿ ಕೃತ್ಯ ಎಸಗಿದವರು ವಿರುದ್ಧ ಬೆಳಗಾವಿ ಪೊಲೀಸರ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಕನ್ನಡಪರ ಹೋರಾಟಗಾರರು ಇಂದು ಸೋಮವಾರ 9 ಗಂಟೆಗೆ ಒತ್ತಾಯಿಸಿದ್ದಾರೆ.