ಸಂಕೇಶ್ವರ ಪಟ್ಟಣದ ಪ್ರಸಿದ್ಧ ನೀಲಗಾರ ಗಣಪತಿ ದರ್ಶನ ಇಲ್ಲ. ಅಶೋಕ ಲಕ್ಷ್ಮಣ ಹೆದ್ದುರಶೆಟ್ಟಿ ಅವರು ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಕುಟುಂಬಸ್ಥರು ಇಂದು ಮತ್ತು ನಾಳೆ ಗಣೇಶ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಭಾನುವಾರ ಮತ್ತು ಸೋಮವಾರ ನೀಲಗಾರ ಗಣಪತಿಯ ದರ್ಶನವನ್ನು ಬಂದ್ ಮಾಡಲಾಗಿದ್ದು, ಭಕ್ತಾಧಿಗಳು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ. ಸಂಕೇಶ್ವರ ಪಟ್ಟಣದ ಪ್ರಸಿದ್ಧ ನೀಲಗಾರ ಗಣಪತಿ ಹೆದ್ದುರಶೆಟ್ಟಿ ಮನೆತನದ ಅಶೋಕ ಲಕ್ಷ್ಮಣ ಹೆದ್ದುರಶೆಟ್ಟಿ ಅವರು ನಿಧನ ಹಿನ್ನೆಲೆ ಎರಡು ದಿನ ನೀಲಗಾರ ಗಣೇಶನ ದರ್ಶನ ಇಲ್ಲ