ಬಾಲೇನಹಳ್ಳಿ ಕಣಿವೆ ಬಳಿ ಆಟೋ ಮತ್ತು ಬೈಕ್ ನಡುವೆ ಅಪಘಾತ ನಡೆದು ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಚಳ್ಳಕೆರೆ ಕಡೆಗೆ ಹೋಗುತ್ತಿದ್ದ ಅಟೋ ಹಾಗೂ ಚಿತ್ರದುರ್ಗದ ಕಡೆಗೆ ಬರುತ್ತಿದ್ದ ಬೈಕ್ ಗಳು ಮುಖಾಮುಖಿ ಡಿಕ್ಕಿ ಸಂಬವಿಸಿ ಈ ಘಟನೆ ನಡೆದಿದ್ದು ಆಟೋ ಹಾಗೂ ಬೈಕ್ ಎರಡು ವಾಹನಗಳು ಜಖಂ ಗೊಂಡಿದ್ದು ಬೈಕ್ ನಲ್ಲಿದ್ದ ಇಬ್ಬರು ಹಾಗೂ ಆಟೋದಲ್ಲಿದ್ದ ಮಹಿಳೆ ಹಾಗೂ ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡಿದ್ದು ಸ್ಥಳೀಯರು ಗಾಯಾಳುಗಳನ್ನ ಉಪಚರಿಸಿ ಆಸ್ಪತ್ರೆಗೆ ಧಾಖಲಿಸಿದ್ದಾರೆ