ಅನ್ಯರಾಜ್ಯದ ಕ್ಯಾಂಟರ್ ವಾಹನ ಟೂರ್ ಗೈಡ್ ವ್ಯಕ್ತಿ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶ್ರೀರಂಗಪಟ್ಟಣ ಪಟ್ಟಣ ಚೆಕ್ ಪೋಸ್ಟ್ ಬಳಿ ನಡೆದಿದೆ. ಮಂಡ್ಯದ ಗಾಂಧಿನಗರ ನಿವಾಸಿ ಆಂಜನಪ್ಪರ ಪುತ್ರ 48 ವರ್ಷದ ರಮೇಶ್ ಎಂಬುವವರೇ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಈತ ಪ್ರತಿ ನಿತ್ಯ ಕಿರಂಗೂರು ಹಾಗೂ ಪಟ್ಟಣದ ಚೆಕ್ ಪೋಸ್ಟ್ಗಳ ಬಳಿ ನಿಂತು ಹೊರ ರಾಜ್ಯಗಳಿಂದ ಮೈಸೂರು ನಗರ ಸೇರಿದಂತೆ ಕಾಖರ್ಾನೆಗಳಿಗೆ ಅಗತ್ಯ ಸರಕುಗಳನ್ನು ತುಂಬಿ ಬರುವ ಗೂಡ್ಸ್ ವಾಹನಗಳ ಚಾಲಕರಿಗೆ ವಿಳಾಸ ತೋರಿಸುವಂತೆ ನಿಲ್ಲಿಸಿ, ಅದೇ ವಾಹನಗಳಲ್ಲಿ ಹೋಗಿ ಬರುತ್ತಿದ್ದ. ಇಂದು ಸಹ ಕ್ಯಾಂಟರ್ ವಾಹನ ಬರುತ್ತಿದ್ದಂತೆ ಕೈ ತೋರಿಸಿ ರಸ್ತೆಗೆ